OVERVIEW

IISc OPEN DAY 2020

LAST DATE TO REGISTER : 26th February 2020.

The Indian Institute of Science, Bangalore, as in the previous years, is organizing an “OPEN DAY” event to show-case its activities to the student community and the general public on SATURDAY, 29th February 2020 from 9 am to 5:30 pm.

On this day, students, science and technology enthusiasts, and the public, will have an opportunity to visit the Institute and go around the campus to explore the exciting science and technology initiatives and activities of the Institute. The Open Day will feature popular lectures, experimental demos, poster presentations, quiz contests, scientific competitions, and exhibitions that will be showcased in the various departments and centres. A “Kids-Zone” will offer a special attraction for all the younger students, with a number of science and technology demos will be on display.

Entry to the Open day is free.

In the Open Day, only departments of IISc are allowed to showcase their research activities. No outsiders are allowed to showcase anything on the Open Day. Such requests will not be allowed.

Important Information and Guidelines

We have received overwhelming response from institutions and individuals to visit the IISc Campus for the Open Day. In order to minimize inconvenience to the visitors and for streamlining the logistics, we provide below important information and guidelines.

  • All the school buses/vans will have to be parked in one of the following two locations: (1) in front of the open ground opposite to Lakshmi Ammanni college; OR (2) inside the Gymkhana ground. In the first case, the passengers in the buses/vans will have alight opposite the Circle Maramma Junction and walk into the IISc Campus through the subway past SID. In the second case, the passengers in the buses/vans will have alight at the IISc Main Gate (at the Prof. CNR Rao Circle).
  • Visitors are strongly encouraged to use public transport as far as possible.
  • Inside the IISc campus, the visitors may use e-Rikshaws to commute from one end to another. 15 e-Rikshaws (Trans-Vahan) have been pressed into service. The service is available free of cost.
  • Since construction work is ongoing inside the campus at several places, the visitors are requested to walk with care. Parents and guardians are requested to keep a constant watch on their younger ones.
  • Help Desks are available at all vantage spots where you are encouraged to ask for any help.
  • Please bring your own water bottles. Water will be available in plenty for refilling your water bottles.
  • During your sojourn in the IISc campus, please help us keep the IISc campus clean and green.

  • Please remember the following phone numbers:
    Helpline: 080 22932225 / 22932400
    General Contact: 080 22932770 / 22932228
    IISc Health Centre: 080 22932227 / 22932234 / 22932390 / 91649-58467
    Ambulance Van: 9008096930 / 9731170742

Warm welcome to all!

Please look up FAQ for more details.

ಭಾರತೀಯ ವಿಜ್ಞಾನ ಸಂಸ್ಥೆ

‘ಓಪನ್ ಡೇ’

ಸಾರ್ವಜನಿಕರಿಗೆ ಮುಕ್ತ ದಿನ-೨೦೨೦

ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು, ಈ ಹಿಂದಿನ ವರ್ಷಗಳಂತೆ ಸಂಸ್ಥೆಯ ’ಓಪನ್ ಡೇ-ಸಾರ್ವಜನಿಕರಿಗೆ ಮುಕ್ತ ದಿನ’ವನ್ನು ೨೦೨೦ರ ಫೆಬ್ರವರಿ ೨೯ರ ಶನಿವಾರ ಆಯೋಜಿಸಿದೆ. ಅಂದು ಬೆಳಿಗ್ಗೆ ೯ರಿಂದ ಸಂಜೆ ೫.೩೦ರವರೆಗೆ ಸಂಸ್ಥೆಯ ಪ್ರವೇಶ ಮುಕ್ತವಾಗಿರಲಿದ್ದು, ಸಾರ್ವಜನಿಕರು ಮತ್ತು ವಿದ್ಯಾರ್ಥಿ ಸಮುದಾಯಗಳಿಗೆ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಪ್ರದರ್ಶಿಸಲಾಗುವುದು.

ಅಂದು ವಿದ್ಯಾರ್ಥಿಗಳು, ವಿಜ್ಞಾನ-ತಂತ್ರಜ್ಞಾನ ಆಸಕ್ತರು, ಸಾರ್ವಜನಿಕರು, ಸಂಸ್ಥೆಯ ಆವರಣದಲ್ಲಿ ಓಡಾಡಲು ಹಾಗೂ ಮಾಹಿತಿಪೂರ್ಣ ಮತ್ತು ಆಕರ್ಷಕ ವಿಜ್ಞಾನ-ತಂತ್ರಜ್ಞಾನ ಚಟುವಟಿಕೆಗಳನ್ನು ಅರಿಯಲು ಪ್ರವೇಶ ಮುಕ್ತವಾಗಿರುತ್ತದೆ. ಅಂದು ಸಂಸ್ಥೆಯ ವಿವಿಧ ವಿಭಾಗಗಳು ಮತ್ತು ಕೇಂದ್ರಗಳಲ್ಲಿ ಜನಪ್ರಿಯ ಉಪನ್ಯಾಸಗಳು, ಪ್ರಾಯೋಗಿಕ ಪ್ರದರ್ಶನಗಳು, ಭಿತ್ತಿಪತ್ರ ಪ್ರದರ್ಶನ, ರಸಪ್ರಶ್ನೆ ಸ್ಪರ್ಧೆ, ವಿವಿಧ ವೈಜ್ಞಾನಿಕ ಸ್ಪರ್ಧೆಗಳು ಮತ್ತು ಪ್ರದರ್ಶನಗಳು ನಡೆಯಲಿವೆ.

ಯುವ ವಿದ್ಯಾರ್ಥಿಗಳ ಆಕರ್ಷಣೆಗಾಗಿ ’ಕಿಡ್ಸ್-ಝೋನ್’ ಕಾರ್ಯಕ್ರಮ ಆಯೋಜಿಸಲಾಗಿದ್ದು ಅಲ್ಲಿ ವಿಜ್ಞಾನ- ತಂತ್ರಜ್ಞಾನದ ಹಲವಾರು ಪ್ರದರ್ಶನಗಳು ನಡೆಯಲಿವೆ.

ಓಪನ್ ಡೇ ಪ್ರವೇಶ ಸಂಪೂರ್ಣ ಉಚಿತವಾಗಿರುತ್ತದೆ.

ಪ್ರಮುಖ ಮಾಹಿತಿ ಮತ್ತು ಮಾರ್ಗಸೂಚಿ:

ಸಂಸ್ಥೆಯ ಕ್ಯಾಂಪಸ್‌ನಲ್ಲಿ ನಡೆದ ಈ ಹಿಂದಿನ ಓಪನ್ ಡೇ ಕಾರ್ಯಕ್ರಮದಲ್ಲಿ ವೈಯಕ್ತಿಕ ಮತ್ತು ಸಾಂಸ್ಥಿಕವಾಗಿ ಭಾರಿ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು ಭೇಟಿ ನೀಡುವವರಿಗೆ ಉಂಟಾಗುವ ಅನಾನುಕೂಲಗಳನ್ನು ಕಡಿಮೆ ಮಾಡಲು ಹಾಗೂ ಸಾರಿಗೆ ಮತ್ತಿತರ ಮೂಲಸೌಕರ್ಯಗಳನ್ನು ವ್ಯವಸ್ಥಿತಗೊಳಿಸಲು ಈ ಕೆಳಗಿನ ಪ್ರಮುಖ ಮಾಹಿತಿ ಮತ್ತು ಮಾರ್ಗಸೂಚಿಗಳನ್ನು ನೀಡಲಾಗಿದೆ:

  • ಎಲ್ಲಾ ಶಾಲಾ ಬಸ್/ವಾಹನಗಳನ್ನು ಈ ಎರಡು ಸ್ಥಳಗಳಲ್ಲಿ ನಿಲುಗಡೆ ಮಾಡಬೇಕಿರುತ್ತದೆ: (೧) ಲಕ್ಷ್ಮಿ ಅಮ್ಮಣ್ಣಿ ಕಾಲೇಜು ಎದುರಿನ ಮೈದಾನ. ಅಥವ (೨) ಜಿಮ್‌ಖಾನಾ ಮೈದಾನದ ಒಳಗೆ. ಮೊದಲ ಆಯ್ಕೆಯಲ್ಲಿ ಸಂದರ್ಶಕರು ಸರ್ಕಲ್ ಮಾರಮ್ಮ ವೃತ್ತದ ಬಳಿ ಇರುವ ಐಐಎಸ್‌ಸಿ ದ್ವಾರದ ಮೂಲಕ ಪ್ರವೇಶಿಸಿ ಕ್ಯಾಂಪಸ್ ಒಳಗಿರುವ ಎಸ್‌ಐಡಿ ಕೆಳಮಾರ್ಗದ ಮೂಲಕ ಓಡಾಡಬಹುದು. ೨ನೇ ಆಯ್ಕೆಯಲ್ಲಿ ವಾಹನಗಳ ಪ್ರಯಾಣಿಕರು/ಸಂದರ್ಶಕರು ಐಐಎಸ್‌ಸಿ ಮುಖ್ಯ ದ್ವಾರ (ಪ್ರೊಫೆಸರ್ ಸಿಎನ್‌ಆರ್ ರಾವ್ ವೃತ್ತ) ಮೂಲಕ ಪ್ರವೇಶಿಸಬಹುದು.
  • ಸಂದರ್ಶಕರು ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆ ಬಳಸಲು ಕೋರಲಾಗಿದೆ.
  • ಐಐಎಸ್‌ಸಿ ಆವರಣದ ಒಳಗೆ ಸಂದರ್ಶಕರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳಲು ಇ- ರಿಕ್ಷಾಗಳನ್ನು ಬಳಸಬಹುದು. ಈ ಸೇವೆಗಾಗಿ ೧೫ ಇ-ರಿಕ್ಷಾಗಳನ್ನು ಒದಗಿಸಲಾಗಿದೆ. ಇ-ರಿಕ್ಷಾ ಸೇವೆ ಸಂಪೂರ್ಣ ಉಚಿತವಾಗಿದೆ.
  • ಸಂಸ್ಥೆಯ ಆವರಣದೊಳಗಿನ ಹಲವು ಸ್ಥಳಗಳಲ್ಲಿ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿರುವುದರಿಂದ ಸಂದರ್ಶಕರು ಎಚ್ಚರಿಕೆಯಿಂದ ಓಡಾಡುವಂತೆ ಕೋರಲಾಗಿದೆ. ಮಕ್ಕಳ ಬಗ್ಗೆ ಪೋಷಕರು ಸತತ ನಿಗಾ ವಹಿಸುವಂತೆ ಮನವಿ ಮಾಡಲಾಗಿದೆ.
  • ಪ್ರಮುಖ ಸ್ಥಳಗಳಲ್ಲಿ, ಅಲ್ಲಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಸಂದರ್ಶಕರು ಯಾವುದೇ ನೆರವಿಗಾಗಿ ಈ ಸೇವೆ ಬಳಸಿಕೊಳ್ಳಲು ಕೋರಲಾಗಿದೆ.
  • ಆವರಣದ ಹಲವು ಸ್ಥಳಗಳಲ್ಲಿ ಕುಡಿಯುವ ನೀರು ಸೌಲಭ್ಯ ಒದಗಿಸಲಾಗಿದೆ. ಆದರೆ ನೀರಿನ ಬಾಟಲಿಯನ್ನು ದಯವಿಟ್ಟು ತಾವೇ ತರುವಂತೆ ಕೋರಲಾಗಿದೆ.
  • ಭೇಟಿಯ ವೇಳೆ ಐಐಎಸ್‌ಸಿ ಆವರಣವನ್ನು ಸ್ವಚ್ಛ ಹಾಗೂ ಹಸಿರಾಗಿ ಇರಿಸಲು ನಮಗೆ ನೆರವಾಗುವಂತೆ ವಿನಂತಿಸಲಾಗಿದೆ.
  • ಆವರಣದೊಳಗೆ ದ್ವಿಚಕ್ರ ವಾಹನಗಳು ಎಚ್ಚರಿಕೆಯಿಂದ ಸಂಚರಿಸುವಂತೆ ಹಾಗೂ ಸಾಧ್ಯವಾದಷ್ಟು ಹಾರ್ನ್/ಹಾಂಕ್ ಮಾಡದಂತೆ ವಿನಂತಿಸಲಾಗಿದೆ.
  • ತಿಂಡಿ ಪೊಟ್ಟಣ ಮತ್ತು ಇತರ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ನಿಗದಿತ ಕಸದಬುಟ್ಟಿಗಳಲ್ಲೇ ಹಾಕಲು ಕೋರಲಾಗಿದೆ.
    (ಈ ಎರಡು ಅಂಶಗಳನ್ನು ಬೇಕಾದರೆ ಬಳಸಿ)


  • ಈ ದೂರವಾಣಿ ಸಂಖ್ಯೆಗಳನ್ನು ನೆನಪಿಡಿ:

    ಸಹಾಯವಾಣಿ: ೦೮೦-೦೮೦ ೨೨೯೩೨೨೨೫ / ೨೨೯೩೨೪೦೦

    ಸಾಮಾನ್ಯ ಸಂಪರ್ಕ: ೦೮೦ ೨೨೯೩೨೭೭೦ / ೨೨೯೩೨೨೨೮
    ಐಐಎಸ್‌ಸಿ ಆರೋಗ್ಯ ಘಟಕ: ೦೮೦ ೨೨೯೩೨೨೨೭ / ೨೨೯೩೨೨೩೪ / ೨೨೯೩೨೩೯೦ / ೯೧೬೪೯-೫೮೪೬೭
    ಆಂಬುಲೆನ್ಸ್ ವಾಹನ: ೯೦೦೮೦೯೬೯೩೦ / ೯೭೩೧೧೭೦೭೪೨
    ಎಲ್ಲರಿಗೂ ಆದರದ ಸ್ವಾಗತ!!